ಚಿಟ್ಟು ಗಿಳಿ ( ), ಇದನ್ನು ಹೊಟ್ಟು ಗಿಳಿ ಎಂದೂ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು . == ವಿವರಣೆ == ಇವು ಕೇವಲ 14ಸೆಂ.ಮೀ ಉದ್ದವಿರುವ, ಭಾರತದ ಅತೀ ಪುಟ್ಟ ಗಿಳಿಗಳು. ದಟ್ಟ ಹಸಿರು ಮೈ ಬಣ್ಣದ ಈ ಗಿಳಿಗಳ ಹೊಟ್ಟೆಯ ಭಾಗ ಹಳದಿ ಮಿಶ್ರಿತ ಹಸಿರು ಬಣ್ಣವನ್ನು ಹೊಂದಿದೆ. ಇವುಗಳು ನಸು ಹಳದಿ ಮಿಶ್ರಿತ ಕೆಂಪು ಕೊಕ್ಕನ್ನು ಹೊಂದಿವೆ. ಬಾಲದ ಮೇಲೆ ಕಪ್ಪು ಮಚ್ಚೆ ಇರುತ್ತದೆ. == ವ್ಯಾಪ್ತಿ == ಈ ಗಿಳಿಗಳು ಸಹ್ಯಾದ್ರಿಯ ಕಾಡುಗಳಿಗೂ ಮತ್ತು ಅರೆ ಮಲೆನಾಡು ಪ್ರದೇಶಗಳಿಗೂ ಸೀಮಿತವಾಗಿವೆ. == ಆಹಾರ == ಹೂವಿನ ರಸ ಮತ್ತು ಚಿಕ್ಕ ಹಣ್ಣುಗಳು ಇವುಗಳ ಆಹಾರ. == ಸಂತಾನೋತ್ಪತ್ತಿ == ಇವುಗಳು ಮರಿಮಾಡುವ ಕಾಲ ಫೆಬ್ರವರಿಯಿಂದ ಏಪ್ರಿಲ್ ವರೆಗೆ ಇರುತ್ತದೆ. ಇವು ಮರದ ಪೊಟರೆಯಲ್ಲಿ ಗೂಡು ಮಾಡಿ 2 ರಿಂದ 4 ಮೊಟ್ಟೆಗಳನ್ನು ಇಡುತ್ತವೆ.